UPSC Civil Services (Main) Examination 2026 — Kannada (Compulsory): Question Paper | Plutus IAS

UPSC Civil Services (Main) Examination 2026 — Kannada (Compulsory): Question Paper | Plutus IAS

The questions below are from Kannada (Compulsory) of UPSC Civil Services (Main) Examination 2026 (held 2026-08-29) — the actual paper, which is public government content. This page carries the questions for reference and revision; model answers for this paper are not published here.

Official paper (PDF): upsc.gov.in.

  1. ಕೆಳಕಂಡ ಯಾವುದಾದರೂ ಒಂದು ವಿಷಯದ ಬಗ್ಗೆ 600 ಪದಗಳ ಮಿತಿಯೊಳಗೆ ಪ್ರಬಂಧ ಬರೆಯಿರಿ : – (a) ಭಾರತೀಯತೆ ಮತ್ತು ನಮ್ಮ ಭವಿಷ್ಯ – (b) ಡಿಜಿಟಲ್ ಯುಗದಲ್ಲಿ ನಾಗರಿಕರ ಕರ್ತವ್ಯ – (c) ಭಾರತೀಯ ಅಂತರಿಕ್ಷ ಸಂಶೋಧನೆ ಮತ್ತು ಮಂಗಳಯಾನ – (d) ಆರೋಗ್ಯ ಸೇವೆಯಲ್ಲಿ ಲಭ್ಯತೆ ಮತ್ತು ಗುಣಾತ್ಮಕತೆ
  2. ಕೆಳಗಿನ ಗದ್ಯ ಭಾಗವನ್ನು ಇಂಗ್ಲೀಷಿಗೆ ಅನುವಾದಿಸಿ : ಪ್ರಾಚೀನ ಕಾಲದಿಂದಲೂ ಭಾರತೀಯ ನೌಕಾಯಾನದ ನಾವಿಕರು ಎಂದೆಂದಿಗೂ ನವೀಕರಿಸಬಹುದಾದ ನೌಕಾಯಾನದ ಕೌಶಲ್ಯ ತಂತ್ರಗಳನ್ನು ಹೊಂದಿದವರಾಗಿದ್ದಾರೆ. ಅವರು ಐದು ಸಾವಿರ ವರ್ಷಗಳ ಹಿಂದಿನಿಂದಲೂ ಸಮುದ್ರಯಾನವನ್ನು ಮಾಡುತ್ತಾ ಬಂದಿರುತ್ತಾರೆ. ಆಧುನಿಕ ಕಾಲದ ಸಾಧನ ಸಾಮಗ್ರಿಗಳು ಆ ಕಾಲದಲ್ಲಿರಲಿಲ್ಲ. ವೈಜ್ಞಾನಿಕ ಸಲಕರಣೆಗಲ್ಲದ ಆ ಕಾಲದಲ್ಲಿ ಸಮುದ್ರಯಾನಕ್ಕೆ ಕೆಲವೇ ಕೆಲವು ಸೀಮಿತ ಸಾಧನಗಳಿದ್ದವು. ಆದರೂ ಪ್ರಾಚೀನ ಕಾಲದ ಭಾರತೀಯ ನಾವಿಕರು ವಾತಾವರಣ ಹಾಗೂ ಪರಿಸರದ ಗುಣ ಲಕ್ಷಣಗಳನ್ನು ಸೂಕ್ಷ್ಮತೆಯಿಂದ ತಿಳಿದವರಾಗಿದ್ದರು. ಮರಗಿಡಗಳು, ಬೀಸುವ ಗಾಳಿಯ ದಿಕ್ಕು, ಹಾಗೂ ನೀರಿನ ಬಣ್ಣದಿಂದಲೇ ನೀರಿನ ಆಳವನ್ನು ಬಲ್ಲವರಾಗಿದ್ದು, ವಾತಾವರಣದ ಮುನ್ಸೂಚನೆಯನ್ನು ಗ್ರಹಿಸುತ್ತಿದ್ದರು. ಸಾಗರದ ಏರಿಳಿತವನ್ನು ಗಮನಿಸುತ್ತಾ ಜಲಚರಗಳ ಚಲನೆಯನ್ನು ತಿಳಿಯುತ್ತಲೇ ಭೂಮಿ ಮತ್ತು ಸಮುದ್ರದ ನಡುವಿನ ಅಂತರವನ್ನು ನಿರ್ಧರಿಸುತ್ತಿದ್ದರು. ಸರಿ-ತಪ್ಪುಗಳ ಪ್ರಯತ್ನ ಮತ್ತು ಅನುಭವದ ಆಧಾರಗಳಿಂದಲೇ ದೂರ ದೂರದ ದೇಶಗಳ ಲಂಗರುಗಳನ್ನು ಕಂಡುಹಿಡಿಯುತ್ತಿದ್ದರು. ಇವೆಲ್ಲವೂ ಅವರಿಗೆ ಬದುಕಿನ ಅನುಭವದಿಂದಲೇ ಬರುತ್ತಿತ್ತು. ಕಡಲಿಗೆ ಸಂಬಂಧಿಸಿದ ಯಾವುದೇ ಶೈಕ್ಷಣಿಕ ತರಬೇತಿ ಇಲ್ಲದೇ; ಇದಲ್ಲವನ್ನು ಸಾಧಿಸಿದ್ದರು. ಕೆಲವು ವೇಳೆ ಅಪಘಾತಗಳು ಸಂಭವಿಸುತ್ತಿದ್ದವು. ಅವರ ಧೈರ್ಯ ಮತ್ತು ಸ್ವ-ಸಾಮರ್ಥ್ಯವು ನಿರಂತರವಾಗಿ ಅವರಿಗೆ ಶಕ್ತಿ ಸಂಚಯನವಾಗಿ ಉತ್ಸಾಹವನ್ನು ನೀಡುವಲ್ಲಿ ಕಾರಣವಾಗುತ್ತಿತ್ತು. ಸಾಗರದ ಭಯವೇ ಅವರಿಗೆ ಒಂದು ಶಕ್ತಿಯಾಗಿತ್ತು. ಇಷ್ಟಾಗಿಯೂ ಅವರು ಪಶ್ಚಿಮದ ಪರ್ಶಿಯನ್ ಗಲ್ಫ್‌ನ್ನು ತಲುಪಿದ್ದರು. ಜೊತೆಗೆ ಪೂರ್ವದ ಆಫ್ರಿಕಾ ಮತ್ತು ಗುಡ್ಡಗಾಡಿನ ನಡುಗಡ್ಡೆಗಳಾದ ಇಂಡೋನೇಷಿಯಾ, ಕಾಂಬೋಡಿಯಾ, ಅನ್ನಂ, ಬೋನೀಯೊ ಮತ್ತು ಲೆಲಬಸ್ ಮುಂತಾದ ಪೂರ್ವ ಪಶ್ಚಿಮ ದೇಶಗಳನ್ನು ಸಂಧಿಸುತ್ತಿದ್ದರು. 1920 ರ ಪೂರ್ವದಲ್ಲಿ ಆಧುನಿಕ ಕಾಲದ ಸಾಗರಯಾನದ ಸಾಹಸಮಯವಾದ ತರಬೇತಿ ಅವರಿಗೆ ಅರಿವಿಗೆ ಬಂದಿತ್ತು. ಸ್ವತಂತ್ರ ಭಾರತದಲ್ಲಿ ಪ್ರಶಾಂತವಾದ ಗಾಳಿ ವ್ಯಾಪಕವಾಗಿ ಬೀಸುತ್ತಿದೆ. ಸಮುದ್ರಯಾನದ ಪರಂಪರೆಯಲ್ಲಿ ಭಾರತದ ಸೂರ್ಯ ಅತ್ಯಂತ ವೈಭವಯುತವಾಗಿ ಪ್ರಕಾಶಿಸುತ್ತಿದ್ದಾನೆ. ಇದುವರೆವಿಗೆ ಕೆಲವು ಕೆಲವೇ ರಾಷ್ಟ್ರಗಳಲ್ಲಿದ್ದ ಈ ಹೊಳಪು ಭಾರತದಲ್ಲಿ ಉದಯಿಸುತ್ತಿದೆ. ಹಾಗಾಗಿ ಭಾರತೀಯ ನೌಕಾಯಾನವು ಹೊಸಕಾಲದ ಶೀರ್ಷಿಕೆಯ ಮೂಲಕ ಸರಿದಾರಿಯಲ್ಲಿ ಸಾಗುತ್ತಿದೆ.
  3. ಕೆಳಗಿನ ಗದ್ಯ ಭಾಗವನ್ನು ಕನ್ನಡಕ್ಕೆ ಅನುವಾದಿಸಿ : Orientation for entrepreneurship has to start right from the schools. In schools, teachers need to highlight the role of entrepreneurship in national development. During college, students must be exposed to business development opportunities and must be trained towards the creation of new enterprises. Parents should encourage their children to take up new ventures after their education. We should cultivate a mindset that 'Idea is wealth'. The government must create a facilitating environment for the provision of venture capital for innovative ideas without collateral security. Universities and engineering and management institutions should work with banks and other funding agencies towards simplifying procedures for setting up businesses and working with entrepreneurs till the project becomes self-sustaining and viable. Procedures in government should facilitate the spotting and recognition of new Indian talent in entrepreneurship by creating a level playing field for healthy competition. Citizens who can afford it should turn themselves into angel investors or start venture capital organizations to fund such new ventures. Big and small industries need to have an open mind in order to encourage and partner with young entrepreneurs.
  4. (a) ಕೆಳಗಿನ ಗಾದೆ ಮಾತುಗಳನ್ನು ವಿಸ್ತರಿಸಿ ಬರೆಯಿರಿ : 2×5=10 – (i) ಅಲ್ಪರ ಸಂಗ ಅಭಿಮಾನ ಭಂಗ 2 – (ii) ಮಾಡಿದುಣ್ಣೋ ಮಾರಾಯ 2 – (iii) ಕೈ ಕೆಸರಾದರೆ ಬಾಯ್ ಮೊಸರು 2 – (iv) ಮಾತು ಬೆಳ್ಳಿ – ಮೌನ ಬಂಗಾರ 2 – (v) ಓದು ಬಕ್ಕಾಲು ಬುದ್ಧಿ ಮುಕ್ಕಾಲು 2 (b) ಕೆಳಗಿನ ಪದಗಳಿಗೆ ವಿರುದ್ಧಾರ್ಥ ಪದಗಳನ್ನು ಬರೆಯಿರಿ : 2×5=10 – (i) ಸುಖ 2 – (ii) ಚೇತನ 2 – (iii) ವಾಸ್ತವ 2 – (iv) ಮೃದು 2 – (v) ಪ್ರಾರಂಭ 2 (c) ಕೆಳಗಿನ ಪದಗಳನ್ನು ಒಡೆದು ಸಂಧಿರೂಪ ತಿಳಿಸಿ : 2×5=10 – (i) ಕೆಂದಾವರೆ 2 – (ii) ಚಂದ್ರೋದಯ 2 – (iii) ಹೂದೋಟ 2 – (iv) ವಾಗ್ದಾನ 2 – (v) ದೇವೇಂದ್ರ 2 (d) ಕೆಳಗಿನ ಕಾವ್ಯ ಮತ್ತು ವಚನದ ಸಾಲುಗಳು ಯಾವ ಕವಿ ಹಾಗೂ ವಚನಕಾರರಿಂದ ರಚನೆಯಾಗಿದೆ : 2×5=10 – (i) ವಿದ್ಯೆ ಕಲಿಸದ ತಂದೆ ಬುದ್ಧಿ ಹೇಳಿದ ಗುರುವು 2 – (ii) ಹುಸಿನಗುತ ಬಂದೇವ ನಸುನಗುತ ಬಾಳೋಣ 2 – (iii) ಓ ನನ್ನ ಚೇತನ ಆಗು ನೀ ಅನಿಕೇತನ 2 – (iv) ಕಳಬೇಡ ಕೊಲಬೇಡ ಹುಸಿಯ ನುಡಿಯಲುಬೇಡ 2 – (v) ಹಸಿವಾದೊಡೆ ಭಿಕ್ಷಾನ್ನಗಳುಂಟು, ತೃಷೆಯಾದೊಡೆ ಕೆರೆ ಹಳ್ಳ ಬಾವಿಗಳುಂಟು 2

Questions reproduced from the official paper for study purposes; verify on the exam-conducting body’s official website.


Related — other papers of this exam

No Comments

Post A Comment