10 Sep UPSC Civil Services (Main) Examination 2026 — Kannada Literature Paper II: Question Paper | Plutus IAS
The questions below are from Kannada Literature Paper II of UPSC Civil Services (Main) Examination 2026 (held 2026-08-30) — the actual paper, which is public government content. This page carries the questions for reference and revision; model answers for this paper are not published here.
Official paper (PDF): upsc.gov.in.
- ** ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) 10×5=50 (a) ಮೊರೆಯ ಪರಿಗಳ ಭೋರಂದೋರಂತೆ ಮಂಗಳ ಗೀತಿಗಳ ನೆರೆಯ ಗಣಿಕಾನೀಕಂ ಬಂದಾದ ಪುಣ್ಯಜಲಂಗಳಿಂ ತರಿಸಿ ಮಿಸಿಸುತ್ತಾಗಳ ತಾಂ ತನ್ನ ಕೈಯ್ಯೊಳ ಕಟ್ಟಿದಂ ಕುರುಪರಿವೃಥಂ ಕರ್ಣಂಗಾ ವೀರಪಟ್ಟದ ಪಟ್ಟಮಂ (b) ಉಟ್ಟುದ ತೊರೆದವಂಗೆ ಉರೇನು, ಕಾಡೇನು ? ನಷ್ಟಸಂತಾನಕ್ಕೆ ಕುಲವೇನು, ಫಲವೇನು ? ಹುಟ್ಟುಗಟ್ಟಾತಂಗೆ ಪುಣ್ಯವೇನು, ಪಾಪವೇನು ? ಅದು ಕೆಟ್ಟದು, ಅದು ಕೆಟ್ಟದು ನಿನ್ನ ನೀನರಿಯದೆ ದಿಟ್ಟ ಬಯಲಲ್ಲಿ ಬಿದ್ದೆಯಲ್ಲಾ ಅಜಗಣ್ಣ ತಂದೆ ! (c) ಸತ್ಯಧರ್ಮಗಳ ನಿತ್ಯವು ಬೋಧಿಸೆ ತೊತ್ತಿನ ಮನಸಿಗೆ ಸೊಗಸೀತೆ ತತ್ತ್ವದ ಅರ್ಥವ ವಿಚಿತ್ರದಿ ಪೇಳೆ ಕತ್ತೆಯ ಚಿತ್ರಕೆ ಹತ್ತೀತೆ ಪುತ್ರಳಿ ಬೊಂಬೆಯ ಚಿತ್ರದಿ ಬಣ್ಣಿಸಿ ಮುತ್ತು ಕೊಟ್ಟರೆ ಮಾತನಾಡೀತೆ ಕತ್ತರಿ ತಿಲಕವನೊತ್ತಿ ಫಣೆಯೊಳಿದೆ ಅರ್ಥಿಯ ತೋರದೆ ಇದ್ದೀತೆ (d) ಸರಳ ಕೊರತೆಯೊ ಸಾರಥಿಯ ಮ ತ್ಸರವೊ ರಥದ ವಿಘಾತಿಯೋ ದು ಧರ ಧನುರ್ಭಂಗವೊ ಮಹಾಸ್ತ್ರ ವ್ಯಥೆಯೊ ರವಿಸುತನ ಹುರುಳು ಗೆಡಿಸಿದರೆಂತು ರಿಪುರಾ ಯರಿಗೆ ನಾವ್ ಗೋಚರವೆ ದುರಿತೋ ತ್ಯರುಷವೈಸಲೆ ನಮ್ಮ ಕೆಡಿಸಿತು ಶಿವಶಿವಾ ಎಂದ (e) ಕೊಡದ ಸಾಲಂದದ ಮುಗಿಲ ಕಾಮನಬಿಲ್ಲು ಬಡಿಗೆಯಂ ಬಡಿಯೆ ದೈವಗಳು ಒಡೆದಂತೆ ಗುಡುಗಾದುದೊಳಗಿದ್ದ ನೀರು ತೊ ಟ್ಟಿದುವಂತೆ ಕರೆದುದು ವೃಷ್ಠಿ
- ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ : (a) ಪಂಪ ಕವಿಯ ಕರ್ಣನ ಪಾತ್ರದ ಮೂಲಕ ವೀರಯುಗದ ಶೌರ್ಯ ಮತ್ತು ತ್ಯಾಗದ ಮೌಲ್ಯಗಳನ್ನು ಹೇಗೆ ಪ್ರತಿಪಾದಿಸಿದ್ದಾನೆ ವಿಶ್ಲೇಷಿಸಿ. (b) ವಿದ್ಯುಚ್ಛೋರನೆಂಬ ರಿಸಿಯ ಕಳ್ಳತನದ ತಂತ್ರಗಳು ಮತ್ತು ಪರಿಣಾಮಗಳನ್ನು ಸಮಕಾಲೀನ ನೆಲೆಯಲ್ಲಿ ವಿವೇಚಿಸಿ. (c) ಅಕ್ಕಮಹಾದೇವಿಯ ಸ್ತ್ರೀ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಆಕೆಯ ವಚನಗಳ ಮೂಲಕ ವಿವರಿಸಿ.
- ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ : (a) ಕುಮಾರವ್ಯಾಸ ಭಾರತದ ಕರ್ಣ ಮತ್ತು ಅರ್ಜುನರ ಯುದ್ಧ ಪ್ರಸಂಗದಲ್ಲಿ ಕಂಡು ಬರುವ ಯುದ್ಧ ನೀತಿಯ ಬಗ್ಗೆ ಬರೆಯಿರಿ. (b) “ಮಾಡಿ ತೆಲ್ಲಂ ಪೂಜೆಯಾಗಿ, ಆಡಿ ತೆಲ್ಲಂ ಸ್ತುತಿಯಾಗಿ” – ಎಂಬ ಮಾತು ನಂಬಿಯಣ್ಣನ ಜೀವನದಲ್ಲಿ ಉಂಟುಮಾಡಿದ ಪರಿಣಾಮಗಳನ್ನು ವಿವರಿಸಿ. (c) ಕನಕದಾಸರ ಕೀರ್ತನೆಗಳಲ್ಲಿ ಸಾಮಾಜಿಕ ಸಮಾನತೆಯ ಪರಿಕಲ್ಪನೆ ಹೇಗೆ ಬಿಂಬಿತವಾಗಿದೆ ಎಂಬುದನ್ನು ಉದಾಹರಣೆಗಳೊಂದಿಗೆ ವಿಮರ್ಶಿಸಿ.
- ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ : (a) ಭರತ-ಬಾಹುಬಲಿ ಯುದ್ಧದ ಪ್ರಸಂಗದಲ್ಲಿನ ಬದಲಾವಣೆ ಕುರಿತು ಕವಿ ರತ್ನಾಕರವರ್ಣ ಪ್ರಕಟಿಸಿರುವ ಔಚಿತ್ಯವನ್ನು ವಿವರಿಸಿ. (b) ಬಸವಣ್ಣನವರ ವಚನಗಳಲ್ಲಿ ಕಂಡುಬರುವ ಸಾಮಾಜಿಕ ಸುಧಾರಣೆಯ ಸ್ವರೂಪವನ್ನು ವಿವೇಚಿಸಿ. (c) ಕನಕದಾಸರ ಕೀರ್ತನೆಗಳಲ್ಲಿ ಬಿಂಬಿತವಾಗಿರುವ ಭಾವಗಳನ್ನು, ನೋವುಗಳನ್ನು ವಿವರಿಸಿ.
- ** ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದು 150 ಪದಗಳ ಮಿತಿಯ ಉತ್ತರವಾಗಲಿ) 10×5=50 – (a) ಶುದ್ಧತಪಸ್ವಿ ನಾಟಕದಲ್ಲಿನ ಶಂಬೂಕನ ಪಾತ್ರ 10 – (b) ಪಿ. ಲಂಕೇಶರ 'ನಿವೃತ್ತರು' ಕಥೆಯಲ್ಲಿದ್ದವರ ನಿಜ ಸ್ವರೂಪ 10 – (c) 'ಕೊಣವೇಗೌಡ' ಕಥನ ಗೀತೆ 10 – (d) ವಿಲಿಯಂ ಥಾಂಸ್ ಮತ್ತು ಜಾನಪದ 10 – (e) ಒಗಟುಗಳ ವರ್ಗೀಕರಣ 10
- ** ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ : – (a) ಸಿದ್ಧಲಿಂಗಯ್ಯನವರ ಕವಿತೆಗಳಲ್ಲಿ ಜನಪರ ಆಶಯಗಳನ್ನು ಗುರುತಿಸಿ. 20 – (b) ನವ್ಯಕಥೆಗಳ ವಸ್ತು ಮತ್ತು ಭಾಷೆಯ ಲಕ್ಷಣಗಳನ್ನು ವಿವರಿಸಿ. 20 – (c) "ಮಾಧವಿಯು ಪುರುಷ ಶೋಷಣೆಯನ್ನು ಪ್ರತಿಭಟಿಸುವ ಆಧುನಿಕ ಮಹಿಳೆ" – ಈ ಹೇಳಿಕೆಯನ್ನು ಪರಾಮರ್ಶಿಸಿ. 10
- ** ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ : – (a) "ಬೀದಿಮಕ್ಕಳು ಬೆಳದೊ" ಪುಸ್ತಕದ ಹಿನ್ನೆಲೆಯಲ್ಲಿ ಸಮುದಾಯಗಳ ಅನುಭವದ ಅಂತಃಸತ್ವವನ್ನು ಬಿಂಬಿಸುವಲ್ಲಿ ಗಾದೆಗಳ ಮಹತ್ವವನ್ನು ವಿವರಿಸಿ. 20 – (b) ಜಮೀನ್ದಾರಿ ಮತ್ತು ಆಡಳಿತಶಾಹಿ ವ್ಯವಸ್ಥೆಯ ದಲಿತ ಶೋಷಣೆಯ ಮುಖಗಳು 'ಒಡಲಾಳ' ಕಾದಂಬರಿಯಲ್ಲಿ ಹೇಗೆ ಚಿತ್ರಿತವಾಗಿವೆ. 20 – (c) 'ತೊಘಲಖ್' ನಾಟಕದ ಮಲತಾಯಿಯ ಪಾತ್ರದ ಮಹತ್ವವನ್ನು ಪರಿಚಯಿಸಿ. 10
- ** ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ : – (a) ದೇವರ ನಂಬಿಕೆಯ ಬಗ್ಗೆ ನಾಸ್ತಿಕರು – ಆಸ್ತಿಕರು ಇವರಲ್ಲಿರುವ ಚರ್ಚೆ ಹಾಗೂ ವಾಗ್ವಾದಗಳನ್ನು ವಿಶ್ಲೇಷಿಸಿ. 20 – (b) "ಕನ್ನಡ ಜನಪದ ಕಥೆಗಳ ಎಲ್ಲಾ ವರ್ಗದ ಕಥೆಗಳಿಗೂ 'ಕನ್ನಡ ಜನಪದ ಕಥೆಗಳು' ಸಂಗ್ರಹ ಒಂದು ಉತ್ತಮ ಮಾದರಿಯಾಗಿದೆ" – ಈ ಹೇಳಿಕೆಯನ್ನು ವಿಮರ್ಶಿಸಿ. 20 – (c) 'ಬೆಟ್ಟದ ಜೀವ' ಕಾದಂಬರಿಯಲ್ಲಿ ಗೋಪಾಲಯ್ಯ ಭೂಮಿ ಮತ್ತು ನಿಸರ್ಗದೊಡನೆ ನಡೆಸುವ ಹೋರಾಟವನ್ನು ವಿವರಿಸಿ. 10
Questions reproduced from the official paper for study purposes; verify on the exam-conducting body’s official website.
Related — other papers of this exam
- All papers — UPSC Civil Services (Main) Examination 2026 hub
- Essay (Paper-I) — questions & model answers
- General Studies-I (Paper-II) — questions & model answers
- General Studies-II (Paper-III) — questions & model answers
- General Studies-III (Paper-IV) — questions & model answers
- General Studies-IV (Paper-V) — questions & model answers
- Kannada Literature Paper I — question paper
- Supreme Court directs CBSE to exempt Class 6 from 3-language policy this year - September 10, 2026
- पश्चिम बंगाल विधानसभा में ‘एक राज्य, एक शिक्षा’ नीति पर महत्वपूर्ण विधेयक पारित होगा - September 10, 2026
- West Bengal’s ‘One State, One Education’ Bill: Key Provisions & Controversies - September 10, 2026

No Comments